ಒತ್ತಾಯ ಕೇಂದ್ರೀಕರಣ: ಕೆಲವು ರಚನೆಗಳಲ್ಲಿ ಜೋಡಣೆಯ ಅಥವಾ ರಚನೆಯ ಅನುಕೂಲತೆಗೋಸ್ಕರ ರಂಧ್ರ, ಕೋನ ಮತ್ತು ಗಾತ್ರ ವ್ಯತ್ಯಾಸಗಳು ಇರುತ್ತವೆ. ಇವುಗಳ ಒಟ್ಟು ಹೆಸರು ನ್ಯೂನತೆಗಳು (ಡಿಫೆಕ್ಟ್‌್ಸ). ಇಂಥ ವಸ್ತುಗಳ ಮೇಲೆ ಬಾಹ್ಯ ಬಲಗಳು ಪ್ರಯುಕ್ತವಾದಾಗ ನ್ಯೂನತೆಗಳ ಹತ್ತಿರ ಒತ್ತಾಯ ಸಮನ್ವಯಗೊಂಡಿರುವುದಿಲ್ಲ. ಸಾಮಾನ್ಯವಾಗಿ ಇರಬೇಕಾದುದಕ್ಕಿಂತ ಅನೇಕ ಬಾರಿ ಹೆಚ್ಚು ಒತ್ತಾಯ ಅಲ್ಲಿ ಕೇಂದ್ರೀಕೃತವಾಗಿರುವುದು. ಇದೇ ಒತ್ತಾಯ ಕೇಂದ್ರೀಕರಣ (ಸ್ಟ್ರೆಸ್ ಕಾನ್ಸೆಂಟ್ರೇಷನ್). ನ್ಯೂನತೆಗಳು ಒತ್ತಾಯವನ್ನು ಹೆಚ್ಚಿಸುವುದರಿಂದ ಅವುಗಳಿಗೆ ಒತ್ತಾಯ ವರ್ಧಕಗಳೆಂದು (ಸ್ಟ್ರೆಸ್ ರೇಸóರ್ಸ್) ಹೆಸರು. 
ಉದಾಹರಣೆಗೆ ಒಂದು ಸಣ್ಣ ರಂಧ್ರವಿರುವ ಬಿಗಿಸರಳನ್ನು ್ಙ ಎಂಬ ಬಾಹ್ಯ ಬಲ ಎಳೆದಾಗ ರಂಧ್ರದ ಮೂಲಕ ಹಾಯುವ ಸರಳಿನ ಅಡ್ಡ ಕೊಯ್ತದಲ್ಲಿನ ಒತ್ತಾಯವು ಸಾಮಾನ್ಯವಾಗಿರುವುದಕ್ಕಿಂತ ರಂಧ್ರದ ಪಕ್ಕದಲ್ಲಿ 2-3ರಷ್ಟು ಕೇಂದ್ರೀಕರಣಗೊಂಡಿರುತ್ತದೆ. 
(ವಿ.ಡಿ.ಪಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ